Friday, June 11, 2010

ಒಲವು



ಅರಳ ಬೇಕಾದಾಗ ನನ್ನೊಲವು ಅರಳಲಿಲ್ಲ !

ಸಿಗಬೇಕಿದ್ದ ಪ್ರೀತಿ ಕೊನೆಗೂ ಕೈ ಗೆ ಸಿಗಲಿಲ್ಲ !

ಬಯಸಿದವರು ನಮ್ಮಒಲವ ಬಯಸಲಿಲ್ಲ !

ಅವರ ಹೃದಯದೊಳಗೆ ನಮ್ಮ ಕೂಡಲಿಲ್ಲ !

ಯಾರದೋ ಬಲವಂತಕೆ ಪ್ರೀತಿಸಿದರ  ಗೊತ್ತಿಲ್ಲ !

ಬೇಕೆನ್ನುವ ಪ್ರೀತಿ ನಮಗೆ ನೀಡಲಿಲ್ಲ !

ನಮ್ಮ ಪ್ರೀತಿಯಲಿ ಅವರಿಗೆ ನಂಬಿಕೆ ಬರಲಿಲ್ಲ !

ಹಚ್ಚಿಕೊಂಡ ಪ್ರೀತಿಯನು ತಿರಸ್ಕರಿಸಿದಿರಲ್ಲ !

ಏನ ಮಾಡುವುದೆಂದು ಹುಚ್ಚು ಮನಕೆ ತೋಚಲಿಲ್ಲ !

ಆ ಪ್ರೀತಿಯ ನೆನಪಿನಲ್ಲಿ ಸಾಗುತಿದೆ ಜೀವನವೆಲ್ಲ !

ಕಳೆದುಕೊಂಡ ಪ್ರೀತಿಯನು ನೀಡುವವರು ಬೇಕಲ್ಲ !

ಸೋತರೂ ಹುಚ್ಚುಮನ ಪ್ರೀತಿಯ ಬೆಂಬತ್ತುವುದ ಬಿಡಲಿಲ್ಲ !