ಮನದ ಮಾತಿಗೆ ಜೊತೆಯಾದವಳು !
ಮುಗುಳ್ನಗೆಯ ಚೆಲ್ಲಿ ಮಲ್ಲಿಗೆಯ ಪರಿಮಳವ ಬೀರಿದವಳು !
ಅರಳಿದ ಮನಗಳ ಹಿಂದೆ ಅರಿಯದ ಪ್ರೀತಿಯಿದೆ !
ಮುಗ್ದ ಮನದ ತುಂಬೆಲ್ಲ ನಿಷ್ಕಲ್ಮಶ ಭಾವವಿದೆ !
ಪ್ರೀತಿಯನು ಪ್ರೀತಿಗಾಗಿ ಪ್ರೀತಿಸುವ ಹೃದಯವಿದೆ !
ಭಾವಕೂ ಮೀರಿದ , ಭಾವನೆಗಳೇ ತುಂಬಿರುವ !
ರೂಪಸಿ ಅವಳು ! ಅವಳ ವರ್ಣಿಸಲು ! ಸಾಲದು ಪದಗಳು !
ಬರೆಯುವೆನೆಂದರೆ ಅಕ್ಷರಕೆ ನಿಲುಕುವುದಿಲ್ಲ !
ಅವಳ ಮುಗ್ದ ಹೃದಯದಿ ಪ್ರೀತಿಯ ವಿನಃ ಬೇರೆ ಏನು ಇಲ್ಲ !
ಅವಳ ಪ್ರೀತಿಗೆ ! ಅದರ ರೀತಿಗೆ ! ನನ್ನ ಒಲವೆ ಕಾಣಿಕೆ !
ಅವಳಿಗೆ ಅವಳೇ ಸರಿಸಾಟಿ ! ಬೇರೆ ಯಾವ ಹೋಲಿಕೆ !
ಅಂಥ ಗೆಳತಿ ! ನನ್ನ ಹೃದಯದ ಒಡತಿ !
ಇರಲಿ ಹೀಗೆಯೇ ನಿರ್ಮಲ ಪ್ರೀತಿ !
ಎಂಥ ಹಸಿ ಸುಳ್ಳುಗಳು ಗೆಳತಿ !
ಕಲ್ಲರಳಿ ಹೂವಾಯ್ತು ! ಮುದುಡಿದ ತಾವರೆ ಅರಳಿತು ಎಂದೆಲ್ಲ !
ಸುಳ್ಳು ಗೆಳತಿ! ಇಲ್ಲಿ ಕಲ್ಲರಳಿ ಹೂವಾಗುವುದು ಇಲ್ಲ !
ಮುದುಡಿದ ತಾವರೆ ಅರಳುವುದು ಇಲ್ಲ !
ಇಲ್ಲಿ ಎಲ್ಲವು ಸ್ವಾರ್ಥ ! ಚಿಗುರಿದ ಕನಸನೆ ಮುದುಡಿಸುವ ಜನ !
ಅರಳಿದ ಹೂವನ್ನೇ ಬಾಡಿಸುವ ಮನ !
ಕಂಡ ಕನಸುಗಳ ಕೊಂದು ಬಿಡುವವರೇ ಎಲ್ಲ !
ಯಾರಿಗೂ ಯಾರಲ್ಲಿ ಪ್ರೀತಿಯು ಇಲ್ಲ ! ಪ್ರೇಮವು ಇಲ್ಲ !
ಬರೀಯ ಸ್ವಾರ್ಥ ಗೆಳತಿ ! ಕಪಟ ಅವರ ಪ್ರೇಮ ಪ್ರೀತಿ !
ಇಲ್ಲಿ ನಿರ್ಮಲವಾಗಿರುವುದೊಂದೇ ಸ್ನೇಹ ಗೆಳತಿ !
ನಿಟ್ಟುಸಿರು ಬಿಡುವ ಮನಕೆ ಮದ್ದು ! ಈ ಸ್ನೇಹ ಗೆಳತಿ !
ಉಳಿಸಿಕೊಳ್ಳುವ ಗೆಳತಿ ! ನಿರ್ಮಲ ಮನದಿ ಈ ಸ್ನೇಹವನ್ನು !
ಅರಿತುಕೊಂಡು ಸ್ನೇಹದ ನಿಸ್ವಾರ್ಥ ಭಾವವನ್ನು !
ಯಾರಿಗೂ ಯಾರೂ ಆಗುವುದಿಲ್ಲ ಗೆಳತಿ ಈ ಜೀವನದ ಪಯಣದಲಿ !
ಆದರೆ ಆ ಪಯಣದಲಿ ನಮ್ಮ ಸ್ನೇಹದ ನೆನಪು ಚಿರವಾಗಿರಲಿ !
ಪ್ರೀತಿಸಿರಿ ನಿಮ್ಮ ಪ್ರೀತಿ ಮರೆಯಬಾರದು ಯಾರು ಹಾಗೆ !
ಆರಾದಿಸಿರಿ ನಿಮ್ಮ ಪ್ರೀತಿಯ ಯಾರು ತಿರಸ್ಕರಿಸದ ಹಾಗೆ !
ಹೃದಯದಲ್ಲಿ ಬಂದಿಸಿರಿ ನಿಮ್ಮ ಪ್ರೀತಿಯನ್ನು ಯಾರು ಕದಿಯದ ಹಾಗೆ !
ಅನುಭವಿಸಿರಿ , ಆನಂದಿಸಿರಿ ಪ್ರೀತಿಯ ಮತ್ತೊಂದು ಜನ್ಮದಲಿ ಸಿಗದ ಹಾಗೆ !
ಪ್ರೀತಿಯ ನುಡಿಯಲಿ , ಸಾವಿರ ಕನಸ ತುಂಬಿ , ನನಸಾಗುವ ಹಾಗೆ !
ಯಾಕೆಂದರೆ ಜೀವನ ಅನ್ನೋದೇ ಪ್ರೀತಿ ಅನ್ನೋದ ಮರೆತ ಜಗದಲಿ !
ಪ್ರೀತಿ ಎಂದರೆ ಬರೀ ಸ್ವೇಚ್ಚೆ ಅಂತ ತಿಳ್ಕೊಂಡವರಲಿ !
ಪ್ರೀತಿ ಪಡೆಯುವರಿಗಿಂತ ಕಳ್ಕೊಲ್ಲರೆ ಹೆಚ್ಚಾಗಿರೋ ಮಧ್ಯದಲಿ !
ನಿಜವಾದ ಪ್ರೀತಿಯ ಅರ್ಥ ಹುಡುಕುತ ಅಲೆಯುತಿರುವೆ ಕಾಣದ ಹಾದಿಯಲಿ !