Tuesday, August 31, 2010

ಪ್ರಿಯ ಗೆಳತಿ





ಪ್ರಿಯ ಗೆಳತಿ,

ಕವಿಯಾಗಿ ನಿನಗೆ

ಕವನಗಳನ್ನು ಗೀಚಿಕೊಡುವಾಸೆ

ಆದರೆ ಲೇಖನಿಯ ಕೊರತೆ...!



ಸಪ್ತ ಸಾಗರಗಳನ್ನು ದಾಟಿ

ದಡ ಸೇರಬೇಕೆಂಬ ಆಸೆ

ಆದರೆ ಈಜುವ ಕೊರತೆ...!



ಶಿಲೆಯಲ್ಲಿ ನಿನ್ನ ಕೆತ್ತಬೇಕೆಂಬ

ಆಸೆ ಆದರೆ ಜಕಣಚಾರಿ

ನಾನಲ್ಲವೆಂಬ ಕೊರತೆ...!



ಚಿತ್ರಪಟದಲ್ಲಿ ನಿನ್ನನ್ನು

ಚಿತ್ರಿಸುವ ಆಸೆ. ಆದರೆ

ರವಿವರ್ಮ ನಾನಲ್ಲವೆಂಬ ಕೊರತೆ...!



ಬಾನಿನಲ್ಲಿ ಹಕ್ಕಿಯಂತೆ

ಹಾರಾಡಬೇಕೆಂಬ ಆಸೆ

ಆದರೆ ರೆಕ್ಕೆಗಲಿಲ್ಲವೆಂಬ ಕೊರತೆ....!



ಕನಸುಗಳನ್ನು ಕಾಣುವ ಆಸೆ

ಆದರೆ ನಿದ್ರೆ ಬರುವುದಿಲ್ಲವೆಂಬ ಕೊರತೆ.....!



ಸ್ವಾತಿಯ ಮಳೆಯಿಂದ

ಬಿದ್ದ ಮುತ್ತನ್ನು ತರುವ ಆಸೆ

ಆದರೆ ಮೋಡದ ಕೊರತೆ....!



ಆಕಾಶದಿಂದ ನಕ್ಷತ್ರಗಳನ್ನು

ತಂದುಕೊಡುವ ಆಸೆ ಆದರೆ

ಎತಕುವುದಿಲ್ಲವೆಂಬ ಕೊರತೆ...!



ಮಣ್ಣಿನಿಂದ ವಿಗ್ರಹ ಮಾಡಿ

ದಿನ ನಿನ್ನ ಪೂಜೆ ಮಾಡುವ ಆಸೆ

ಆದರೆ ಕಲಾವಿದ ನಾನಲ್ಲವೆಂಬ ಕೊರತೆ...!



ಒಟ್ಟಾರೆ ನಿನ್ನನ್ನು ಬಣ್ಣಿಸಲು ಪದಗಳು ಸಿಗದಿರುವುದೇ

ಒಂದು ದೊಡ್ಡ ಕೊರತೆ....!