Tuesday, August 31, 2010

ಪ್ರಿಯ ಗೆಳತಿ

ಪ್ರಿಯ ಗೆಳತಿ,

ಕವಿಯಾಗಿ ನಿನಗೆ

ಕವನಗಳನ್ನು ಗೀಚಿಕೊಡುವಾಸೆ

ಆದರೆ ಲೇಖನಿಯ ಕೊರತೆ...!ಸಪ್ತ ಸಾಗರಗಳನ್ನು ದಾಟಿ

ದಡ ಸೇರಬೇಕೆಂಬ ಆಸೆ

ಆದರೆ ಈಜುವ ಕೊರತೆ...!ಶಿಲೆಯಲ್ಲಿ ನಿನ್ನ ಕೆತ್ತಬೇಕೆಂಬ

ಆಸೆ ಆದರೆ ಜಕಣಚಾರಿ

ನಾನಲ್ಲವೆಂಬ ಕೊರತೆ...!ಚಿತ್ರಪಟದಲ್ಲಿ ನಿನ್ನನ್ನು

ಚಿತ್ರಿಸುವ ಆಸೆ. ಆದರೆ

ರವಿವರ್ಮ ನಾನಲ್ಲವೆಂಬ ಕೊರತೆ...!ಬಾನಿನಲ್ಲಿ ಹಕ್ಕಿಯಂತೆ

ಹಾರಾಡಬೇಕೆಂಬ ಆಸೆ

ಆದರೆ ರೆಕ್ಕೆಗಲಿಲ್ಲವೆಂಬ ಕೊರತೆ....!ಕನಸುಗಳನ್ನು ಕಾಣುವ ಆಸೆ

ಆದರೆ ನಿದ್ರೆ ಬರುವುದಿಲ್ಲವೆಂಬ ಕೊರತೆ.....!ಸ್ವಾತಿಯ ಮಳೆಯಿಂದ

ಬಿದ್ದ ಮುತ್ತನ್ನು ತರುವ ಆಸೆ

ಆದರೆ ಮೋಡದ ಕೊರತೆ....!ಆಕಾಶದಿಂದ ನಕ್ಷತ್ರಗಳನ್ನು

ತಂದುಕೊಡುವ ಆಸೆ ಆದರೆ

ಎತಕುವುದಿಲ್ಲವೆಂಬ ಕೊರತೆ...!ಮಣ್ಣಿನಿಂದ ವಿಗ್ರಹ ಮಾಡಿ

ದಿನ ನಿನ್ನ ಪೂಜೆ ಮಾಡುವ ಆಸೆ

ಆದರೆ ಕಲಾವಿದ ನಾನಲ್ಲವೆಂಬ ಕೊರತೆ...!ಒಟ್ಟಾರೆ ನಿನ್ನನ್ನು ಬಣ್ಣಿಸಲು ಪದಗಳು ಸಿಗದಿರುವುದೇ

ಒಂದು ದೊಡ್ಡ ಕೊರತೆ....!
 
 

Thursday, July 22, 2010

ಪ್ರೀತಿಯ ವೇದನೆ...

 
ಹೇಳಲಾಗದ ನೂರು ಭಾವ ಹೇಳಿ ಕೊಳ್ಳಲಾಗದ ವೇದನೆ

ಏನೋ ಅರಿಯೆ  ಮನದಲಿ  ಸಂಕಟ

ಯಾಕೆ ಹೀಗಾಯ್ತೋ? ಏನಾಯ್ತೋ? ಅರಿವಿಲ್ಲ 

ಹಚ್ಚಿಕೊಂಡ ಬದುಕು ಕನಸಾಗಿದೆಯಲ್ಲ

ಕಟ್ಟಿಕೊಂಡ ಕನಸು ಇನ್ನು ಕೂಡ ನನಸಾಗಿಲ್ಲ

ಬದುಕು ಇಲ್ಲರಿಗೂ ಹೀಗೆನಾ? ಅಥವಾ ನಮಗೆ ಮಾತ್ರ ಹೀಗೆನಾ?

ಒಪ್ಪಿಕೊಂಡ, ಹರಸಿಕೊಂಡ ಪ್ರೀತಿ ನಮದಾಗಲಿಲ್ಲ 

ನಂಬಿದವರು ನಮ್ಮ ನಂಬಿಕೆಯ ಉಳಿಸಿಕೊಳ್ಳಲಿಲ್ಲ

ಅರಳಿದ ಪ್ರೀತಿ, ಚಿಗುರುವ ಮುನ್ನ ಚಿವುಟಿದಿರಲ್ಲ

ಅರಳಿದ ಹೂವು, ಮುಡಿಗೆರುವ ಮುನ್ನ ಬಾಡಿಸಿದಿರಲ್ಲ

ಎಷ್ಟೊಂದು ವಿಶ್ವಾಸ ನಂಬಿಕೆ ಪ್ರೀತಿಯಲಿ

ಅದು ನೀಡಿದ ನೋವ ನಾ ಈಗ ಯಾರಿಗೆ ಹೇಳಲಿ

ನಾವು ಹಚ್ಚಿಕೊಂಡವರು, ನಮ್ಮ ನೆಚ್ಚಿ ಕೊಳ್ಳಲಿಲ್ಲ

ನೆಚ್ಚಿಕೊಳ್ಳದೆ ಬಂದವರು, ಬದುಕಾದರಲ್ಲ 

ಮನ ಮತ್ತೆ ಸಾವಿರ ಕನಸ ಕಟ್ಟುವುದು ತಪ್ಪಲಿಲ್ಲ

ನಾ ಕಟ್ಟಿದ ಕನಸು ಎಂದು ನನಸಗುವುದೋ ಅರಿವಿಲ್ಲ

ಹುಚ್ಚು ಮನ, ಆ ಆಸೆಯೊಳಗೆ ಕಾಯುತಿದೆಯಲ್ಲ

ಬರಬಹುದೇ ನನಗೂ ಒಂದಲ್ಲ ಒಂದಿನ, ಗೊತ್ತಿಲ್ಲ 

ಪ್ರೀತಿಗಾಗಿ ದಿನ ಕಾಯುವುದು ತಪ್ಪಲಿಲ್ಲ

ಇಲ್ಲದ, ಯೋಚನೆಯೊಳಗೆ ಮನ ಕೊರಗುತಿದೆಯಲ್ಲ

ಬರಲಿ, ಹಾಗೆಯೆ ಒಂದು ದಿನ

ನನ್ನ ನಲಿವ್ಲಿಗೆ, ನನ್ನ ಖುಷಿಗೆ, ನಾನು ಕುಣಿದಾಡುವ ದಿನ

ನನ್ನ ಪ್ರೀತಿ ನನ್ನನೋಪ್ಪಿಕೊಂಡ ದಿನ

ಕಾಣುವೆ ಭುವಿಯಲಿ ಸ್ವರ್ಗವ ಆ ದಿನ ..........
 
 
 

Friday, June 11, 2010

ಒಲವುಅರಳ ಬೇಕಾದಾಗ ನನ್ನೊಲವು ಅರಳಲಿಲ್ಲ !

ಸಿಗಬೇಕಿದ್ದ ಪ್ರೀತಿ ಕೊನೆಗೂ ಕೈ ಗೆ ಸಿಗಲಿಲ್ಲ !

ಬಯಸಿದವರು ನಮ್ಮಒಲವ ಬಯಸಲಿಲ್ಲ !

ಅವರ ಹೃದಯದೊಳಗೆ ನಮ್ಮ ಕೂಡಲಿಲ್ಲ !

ಯಾರದೋ ಬಲವಂತಕೆ ಪ್ರೀತಿಸಿದರ  ಗೊತ್ತಿಲ್ಲ !

ಬೇಕೆನ್ನುವ ಪ್ರೀತಿ ನಮಗೆ ನೀಡಲಿಲ್ಲ !

ನಮ್ಮ ಪ್ರೀತಿಯಲಿ ಅವರಿಗೆ ನಂಬಿಕೆ ಬರಲಿಲ್ಲ !

ಹಚ್ಚಿಕೊಂಡ ಪ್ರೀತಿಯನು ತಿರಸ್ಕರಿಸಿದಿರಲ್ಲ !

ಏನ ಮಾಡುವುದೆಂದು ಹುಚ್ಚು ಮನಕೆ ತೋಚಲಿಲ್ಲ !

ಆ ಪ್ರೀತಿಯ ನೆನಪಿನಲ್ಲಿ ಸಾಗುತಿದೆ ಜೀವನವೆಲ್ಲ !

ಕಳೆದುಕೊಂಡ ಪ್ರೀತಿಯನು ನೀಡುವವರು ಬೇಕಲ್ಲ !

ಸೋತರೂ ಹುಚ್ಚುಮನ ಪ್ರೀತಿಯ ಬೆಂಬತ್ತುವುದ ಬಿಡಲಿಲ್ಲ !Monday, May 31, 2010

ಪ್ರೀತಿಯ ಗೆಳತಿ
ಮನದ ಮಾತಿಗೆ ಜೊತೆಯಾದವಳು !

ಮುಗುಳ್ನಗೆಯ ಚೆಲ್ಲಿ ಮಲ್ಲಿಗೆಯ ಪರಿಮಳವ ಬೀರಿದವಳು !

ಅರಳಿದ ಮನಗಳ ಹಿಂದೆ ಅರಿಯದ ಪ್ರೀತಿಯಿದೆ !

ಮುಗ್ದ ಮನದ ತುಂಬೆಲ್ಲ ನಿಷ್ಕಲ್ಮಶ ಭಾವವಿದೆ !

ಪ್ರೀತಿಯನು ಪ್ರೀತಿಗಾಗಿ ಪ್ರೀತಿಸುವ ಹೃದಯವಿದೆ !

ಭಾವಕೂ ಮೀರಿದ , ಭಾವನೆಗಳೇ ತುಂಬಿರುವ !

ರೂಪಸಿ ಅವಳು ! ಅವಳ ವರ್ಣಿಸಲು ! ಸಾಲದು ಪದಗಳು !

ಬರೆಯುವೆನೆಂದರೆ ಅಕ್ಷರಕೆ ನಿಲುಕುವುದಿಲ್ಲ !

ಅವಳ ಮುಗ್ದ ಹೃದಯದಿ ಪ್ರೀತಿಯ ವಿನಃ ಬೇರೆ ಏನು ಇಲ್ಲ !

ಅವಳ ಪ್ರೀತಿಗೆ ! ಅದರ ರೀತಿಗೆ ! ನನ್ನ ಒಲವೆ ಕಾಣಿಕೆ !

ಅವಳಿಗೆ ಅವಳೇ ಸರಿಸಾಟಿ ! ಬೇರೆ ಯಾವ ಹೋಲಿಕೆ !

ಅಂಥ ಗೆಳತಿ ! ನನ್ನ ಹೃದಯದ ಒಡತಿ !

ಇರಲಿ ಹೀಗೆಯೇ ನಿರ್ಮಲ ಪ್ರೀತಿ !ಎಂಥ ಹಸಿ ಸುಳ್ಳುಗಳು ಗೆಳತಿ !

ಕಲ್ಲರಳಿ ಹೂವಾಯ್ತು ! ಮುದುಡಿದ ತಾವರೆ ಅರಳಿತು ಎಂದೆಲ್ಲ !

ಸುಳ್ಳು ಗೆಳತಿ! ಇಲ್ಲಿ ಕಲ್ಲರಳಿ ಹೂವಾಗುವುದು ಇಲ್ಲ !

ಮುದುಡಿದ ತಾವರೆ ಅರಳುವುದು ಇಲ್ಲ !

ಇಲ್ಲಿ ಎಲ್ಲವು ಸ್ವಾರ್ಥ ! ಚಿಗುರಿದ ಕನಸನೆ ಮುದುಡಿಸುವ ಜನ !

ಅರಳಿದ ಹೂವನ್ನೇ ಬಾಡಿಸುವ ಮನ !

ಕಂಡ ಕನಸುಗಳ ಕೊಂದು ಬಿಡುವವರೇ ಎಲ್ಲ !

ಯಾರಿಗೂ ಯಾರಲ್ಲಿ ಪ್ರೀತಿಯು ಇಲ್ಲ ! ಪ್ರೇಮವು ಇಲ್ಲ !

ಬರೀಯ ಸ್ವಾರ್ಥ ಗೆಳತಿ ! ಕಪಟ ಅವರ ಪ್ರೇಮ ಪ್ರೀತಿ !

ಇಲ್ಲಿ ನಿರ್ಮಲವಾಗಿರುವುದೊಂದೇ ಸ್ನೇಹ ಗೆಳತಿ !

ನಿಟ್ಟುಸಿರು ಬಿಡುವ ಮನಕೆ ಮದ್ದು ! ಈ ಸ್ನೇಹ ಗೆಳತಿ !

ಉಳಿಸಿಕೊಳ್ಳುವ ಗೆಳತಿ ! ನಿರ್ಮಲ ಮನದಿ ಈ ಸ್ನೇಹವನ್ನು !

ಅರಿತುಕೊಂಡು ಸ್ನೇಹದ ನಿಸ್ವಾರ್ಥ ಭಾವವನ್ನು !

ಯಾರಿಗೂ ಯಾರೂ ಆಗುವುದಿಲ್ಲ ಗೆಳತಿ ಈ ಜೀವನದ ಪಯಣದಲಿ !

ಆದರೆ ಆ ಪಯಣದಲಿ ನಮ್ಮ ಸ್ನೇಹದ ನೆನಪು ಚಿರವಾಗಿರಲಿ !ಪ್ರೀತಿಸಿರಿ ನಿಮ್ಮ ಪ್ರೀತಿ ಮರೆಯಬಾರದು ಯಾರು ಹಾಗೆ !

ಆರಾದಿಸಿರಿ ನಿಮ್ಮ ಪ್ರೀತಿಯ ಯಾರು ತಿರಸ್ಕರಿಸದ ಹಾಗೆ !

ಹೃದಯದಲ್ಲಿ ಬಂದಿಸಿರಿ ನಿಮ್ಮ ಪ್ರೀತಿಯನ್ನು ಯಾರು ಕದಿಯದ ಹಾಗೆ !

ಅನುಭವಿಸಿರಿ , ಆನಂದಿಸಿರಿ ಪ್ರೀತಿಯ ಮತ್ತೊಂದು ಜನ್ಮದಲಿ ಸಿಗದ ಹಾಗೆ !

ಪ್ರೀತಿಯ ನುಡಿಯಲಿ , ಸಾವಿರ ಕನಸ ತುಂಬಿ , ನನಸಾಗುವ ಹಾಗೆ !

ಯಾಕೆಂದರೆ ಜೀವನ ಅನ್ನೋದೇ ಪ್ರೀತಿ ಅನ್ನೋದ ಮರೆತ ಜಗದಲಿ !

ಪ್ರೀತಿ ಎಂದರೆ ಬರೀ ಸ್ವೇಚ್ಚೆ ಅಂತ ತಿಳ್ಕೊಂಡವರಲಿ !

ಪ್ರೀತಿ ಪಡೆಯುವರಿಗಿಂತ ಕಳ್ಕೊಲ್ಲರೆ ಹೆಚ್ಚಾಗಿರೋ ಮಧ್ಯದಲಿ !

ನಿಜವಾದ ಪ್ರೀತಿಯ ಅರ್ಥ ಹುಡುಕುತ ಅಲೆಯುತಿರುವೆ ಕಾಣದ ಹಾದಿಯಲಿ !