Thursday, July 22, 2010

ಪ್ರೀತಿಯ ವೇದನೆ...





 
ಹೇಳಲಾಗದ ನೂರು ಭಾವ ಹೇಳಿ ಕೊಳ್ಳಲಾಗದ ವೇದನೆ

ಏನೋ ಅರಿಯೆ  ಮನದಲಿ  ಸಂಕಟ

ಯಾಕೆ ಹೀಗಾಯ್ತೋ? ಏನಾಯ್ತೋ? ಅರಿವಿಲ್ಲ 

ಹಚ್ಚಿಕೊಂಡ ಬದುಕು ಕನಸಾಗಿದೆಯಲ್ಲ

ಕಟ್ಟಿಕೊಂಡ ಕನಸು ಇನ್ನು ಕೂಡ ನನಸಾಗಿಲ್ಲ

ಬದುಕು ಇಲ್ಲರಿಗೂ ಹೀಗೆನಾ? ಅಥವಾ ನಮಗೆ ಮಾತ್ರ ಹೀಗೆನಾ?

ಒಪ್ಪಿಕೊಂಡ, ಹರಸಿಕೊಂಡ ಪ್ರೀತಿ ನಮದಾಗಲಿಲ್ಲ 

ನಂಬಿದವರು ನಮ್ಮ ನಂಬಿಕೆಯ ಉಳಿಸಿಕೊಳ್ಳಲಿಲ್ಲ

ಅರಳಿದ ಪ್ರೀತಿ, ಚಿಗುರುವ ಮುನ್ನ ಚಿವುಟಿದಿರಲ್ಲ

ಅರಳಿದ ಹೂವು, ಮುಡಿಗೆರುವ ಮುನ್ನ ಬಾಡಿಸಿದಿರಲ್ಲ

ಎಷ್ಟೊಂದು ವಿಶ್ವಾಸ ನಂಬಿಕೆ ಪ್ರೀತಿಯಲಿ

ಅದು ನೀಡಿದ ನೋವ ನಾ ಈಗ ಯಾರಿಗೆ ಹೇಳಲಿ

ನಾವು ಹಚ್ಚಿಕೊಂಡವರು, ನಮ್ಮ ನೆಚ್ಚಿ ಕೊಳ್ಳಲಿಲ್ಲ

ನೆಚ್ಚಿಕೊಳ್ಳದೆ ಬಂದವರು, ಬದುಕಾದರಲ್ಲ 

ಮನ ಮತ್ತೆ ಸಾವಿರ ಕನಸ ಕಟ್ಟುವುದು ತಪ್ಪಲಿಲ್ಲ

ನಾ ಕಟ್ಟಿದ ಕನಸು ಎಂದು ನನಸಗುವುದೋ ಅರಿವಿಲ್ಲ

ಹುಚ್ಚು ಮನ, ಆ ಆಸೆಯೊಳಗೆ ಕಾಯುತಿದೆಯಲ್ಲ

ಬರಬಹುದೇ ನನಗೂ ಒಂದಲ್ಲ ಒಂದಿನ, ಗೊತ್ತಿಲ್ಲ 

ಪ್ರೀತಿಗಾಗಿ ದಿನ ಕಾಯುವುದು ತಪ್ಪಲಿಲ್ಲ

ಇಲ್ಲದ, ಯೋಚನೆಯೊಳಗೆ ಮನ ಕೊರಗುತಿದೆಯಲ್ಲ

ಬರಲಿ, ಹಾಗೆಯೆ ಒಂದು ದಿನ

ನನ್ನ ನಲಿವ್ಲಿಗೆ, ನನ್ನ ಖುಷಿಗೆ, ನಾನು ಕುಣಿದಾಡುವ ದಿನ

ನನ್ನ ಪ್ರೀತಿ ನನ್ನನೋಪ್ಪಿಕೊಂಡ ದಿನ

ಕಾಣುವೆ ಭುವಿಯಲಿ ಸ್ವರ್ಗವ ಆ ದಿನ ..........
 
 
 

4 comments:

  1. ಸುಶೀಲ್ ಅವರೇ,
    ನಾವಂದುಕೊಂಡಂತೆ ನಡೆಯುವಂತಿದ್ದರೆ ಮನುಜ ದೇವರಾಗ್ತಾ ಇರಲಿಲ್ಲವೇ? ಸಿಗದಿದ್ದರ ಬಗ್ಗೆ ಚಿಂತಿಸದೆ ಸಿಕ್ಕಿರುವುದಕ್ಕೆ ಪ್ರೀತಿ ಕೊಡುವುದು ಧರ್ಮವಲ್ಲವೇ?
    ಕವನ ಚನ್ನಾಗಿದೆ.

    ReplyDelete
  2. tumaa chennagide...niceone...keep it up.....

    ReplyDelete